Friday, August 14, 2009

ಸ್ಪೂರ್ತಿ:

ನಾನು ಸ್ಪೂರ್ತಿ ಎಂಬ ತಲೆಬರಹದಲ್ಲಿ ಪದ್ಯ ಬರೆಯಲು ನನಗೆ ಹಾಡಲು ಸಿಕ್ಕಿದ ಸ್ಪೂರ್ತಿಯೇ ಕಾರಣ. ಚಿಕ್ಕಂದಿನಿಂದಲೂ ನನಗೆ ಹಾಡುಗಾರನಾಗಬೇಕೆಂಬ ಬಯಕೆ (ಆಶ್ಚರ್ಯಕರ ಸಂಗತಿಯೆಂದರೆ ತೃತೀಯ ಬಿ.ಕಾಂ ನ ವರೆಗೆ ನಾನು ಸ್ಟೇಜ್ ಹತ್ತಿದವನಲ್ಲ!!!!) ತೃತೀಯ ಬಿ.ಕಾಂ. ನಲ್ಲಿ ಒಮ್ಮೆ ಸ್ಟೇಜ್ ಹತ್ತಿ ಪದ್ಯ ಹೇಳಿದಾಗ ಅದು ತುಂಬಾ ಫ್ಲಾಪ್ ಆಗಿತ್ತು. ಪ್ರೋತ್ಸಾಹಿಸುವವರು ಇಲ್ಲದ ಕಾರಣ ಪದ್ಯ ಹೇಳಲು ತುಂಬಾ ಅಂಜಿಕೆಯಾಗುತ್ತಿತ್ತು. ಆದರೆ ಮಂಗಳೂರಿನಲ್ಲಿ ಎಮ್. ಬಿ. ಎ ಮಾಡುವಾಗ ಸಿಕ್ಕಿದ ಅವಕಾಶ ಹಾಗೂ ಸ್ಪೂರ್ತಿಯು ಕೆಳಗಿನ ಸಾಲು ನನ್ನ ಮನದಲ್ಲಿ ಚಿಗುರೊಡೆಯುವಂತೆ ಮಾಡಿತು.ಮಂಗಳೂರಿಗೆ ದಿವಸಲೂ ಹೋಗಿ ಬರುವುದು ಕಷ್ಟವಾದ್ದರಿಂದ ರೂಮ್ (ಪಿ. ಜಿ)ಹುಡುಕ ಬೇಕಾಯಿತು. ಹಾಗಾಗಿ ಹೊರಗಿನ ಪ್ರಪಂಚ ಹೇಗಿರುತ್ತದೆ ಎಂಬುದನ್ನು ತಿಳಿಯಲು ಅನುಕೂಲವಾಯಿತು.ಬೇಸರವಾಗುತ್ತಿದ್ದಾಗಲೆಲ್ಲ ಸುಮ್ಮನೆ ಬಾಯಲ್ಲಿಗುಯಿ ಗುಡುತ್ತಿದ್ದೆ. ಅದನ್ನೂ ಕೇಳುವ ಕಿವಿಗಳಿವೆ ಎಂದು ತಿಳಿದಾಗ ಹಾಗೆ ಸುಮ್ಮನೆ ಹಾಡುವ ಹುಚ್ಚು ಹಿಡಿಯಿತು..

ಮರೆಯಲಾಗದ ಅನುಭವ:

"ನೀವು ವಾತಾಪಿ..
ಹಾಡನ್ನು ತುಂಬಾ ಚೆನ್ನಾಗಿ ಹಾಡ್ತೀರ".ಎಂದು ನಮ್ಮ ಪಿ.ಜಿ. ಗೆಳತಿಯೊಬ್ಬಳು ಹೇಳಿದಾಗ ನನಗಾದ ಸಂತಸಕ್ಕೆ ಪಾರವೆ ಇಲ್ಲ.ಇದು ನನಗೆ ಸಿಕ್ಕಿದ ಮೊತ್ತ ಮೊದಲ ಪ್ರಶಂಸೆ.ಖಂಡಿತಾ ಆ ದಿನವು ನನ್ನ ಮನದಿಂದ ಅಳಿಯಲಾರದು. ಆ ನುಡಿಗಳುಎ ಈಗಲೂ ನನ್ನ ಮನದಲ್ಲಿ ಆಗಾಗ ಕೇಳಿಬರುತ್ತದೆ.....ಥ್ಯಾಂಕೂ ಡಿಯರ್ ಫ್ರೆಂಡ್,.........
ಹಾಗೆಯೇ ಮುಂದುವರಿಯುತ್ತಾ, ಕಾಲೇಜಿನಲ್ಲಿ ನನ್ನದೇ ಆದ ಗೆಳೆಯರ ಗುಂಪು ಹುಟ್ಟಿತು (ನಾನು, ವಿನೋದ್, ವಿನೀದ್, ಅಶ್ವಿನಿ, ರಾಜಿ, ಕಿಶೋರ್, ಲತಾ, ಶಾಂತಕುಮಾರ, ವಿಜಿ,…….). ಎಲ್ಲರೂ ಸೇರಿ ನನಗೆ ಬಿ.ಕೆ.(ಬಾಲ ಕೃಷ್ಣ) ಎಂಬ ನಾಮಧೇಯವನ್ನೂ ಮಾಡಿದರು. ಇವರೆಲ್ಲರೂ ನನ್ನ ಹಾಡಿಗೆ ಪ್ರೋತ್ಸಾಹ ಕೊಡುತ್ತಿದ್ದರು. ಕಾಲೇಜಿನಲ್ಲಿ ಫ್ರೀ ಇರುವ ಸಮಯದಲ್ಲಿ
ನಮ್ಮದೇ ಲೋಕದಲ್ಲಿ ಹಾಡು ಹೇಳುತ್ತ ಇರುತ್ತಿದ್ದೆವು. ನನ್ನ ರೂಮು ಮೊದಲ ಸ್ಟೇಜ್ ಆದರೆ, ಕಾಲೇಜ್ ಎರಡನೇ ಸ್ಟೇಜ್ ಆಗಿತ್ತು. ವಿನೋದ್ ಅಂತೂ ನನ್ನಗುರುವಾಗಿದ್ದ.ಮಲಯಾಳಮ್ ಭಾಷೆಯ ಮೇಲಿನ ನನ್ನ ವ್ಯಾಮೋಹ ಅವನನ್ನು ನನ್ನ ಗೆಳೆಯನನ್ನಾಗಿಸಿತ್ತು. ಆತನ ಪ್ರೋತ್ಸಾಹದಿಂದ ನಾನು ತುಂಬಾ ಪ್ರಭಾವಿತನಾಗಿದ್ದೆ. ನನ್ನ ಗೆಳೆಯರ ಗುಂಪಿನಲ್ಲಿ ಶಾಂತಕುಮಾರ ಹಾಗೂ ವಿಜಯಲಕ್ಷ್ಮಿ ಒಳ್ಳೆಯ ಹಾಡುಗಾರರಾಗಿದ್ದರು. ಹಾಡುವಾಗ ಪರಸ್ಪರ ಸ್ಪರ್ಧಿಗಳಾದರೂ, ಸಮಾನ ಭಾವದವರಾದ್ದರಿಂದ ಹುಳುಕು ಸ್ವಭಾವವಿರಲಿಲ್ಲ. ಕಾಲೇಜಿನ ಎಲ್ಲಾ ಕಾರಕ್ರಮಗಳಲ್ಲಿಯೂ ಪ್ರಾರ್ಥನಾಗೀತೆ ನಮಗೆ ಕಟ್ಟಿಟ್ಟ ಬುತ್ತಿಯಾಗಿತ್ತು. ಕಾಲೇಜಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಾನು ಹಾಡಿದ “ಭಲೆ ಭಲೆ” ಯೆಂಬ ಹಾಡು ನನ್ನನ್ನು ಒಳ್ಳೆಯ ಹಾಡುಗಾರ ಎಂದು ಗುರುತಿಸಿತು. ಆ ಮೊದಲ ಹಾಡಿನ ಸಮಯದಲ್ಲಾದ ಆತಂಕ “ತೃತೀಯ ಬಿ. ಕಾಂ” ಅನ್ನು ನೆನಪಿಸಿದರೂ, ವಿನೋದ್ ನ ಪ್ರೋತ್ಸಾಹದ ನುಡಿಗಳು ಅವನ್ನು ತಲೆಯೆತ್ತದಂತೆ ಮಾಡಿತು.!! ಖುಷಿಯ ವಿಚಾರವೆಂದರೆ, ಈಗಲೂ ನನ್ನ ಗೆಳೆಯರು ನನ್ನ ಹೆಸರಿನ ಬದಲು "ಭಲೆ ಭಲೆ" ಎಂದು ಕೂಗುತ್ತಾರೆ (ನನ್ನ ಮೊದಲ ಹಾಡು ಅಮೃತ ವರ್ಷಿಣಿ ಕ್ಲಿಕ್ ಆದದ್ದೆ ಇದಕ್ಕೆ ಕಾರಣ). ಹೀಗೊ ಹಾಗೋ ಮಂಗಳೂರಿನ ಕಾಲೇಜ್ ನನ್ನ ಹಾಡುಗಾರನಾಗಬೇಕೆಂಬ ಬಯಕೆಗೆ ಮೊದಲ ಮೆಟ್ಟಿಲಾಯಿತು. ಎರಡನೇ ಮೆಟ್ಟಿಲಿಗಾಗಿ ಕಾಯುತ್ತಾ ಇದ್ದೇನೆ!!!.....
ಉಫ್… ಹೇಗಿದ್ದವ ಹೇಗಾದ???? ನನಗೆ ಬಂದ ಮೊದಲ ಪ್ರಶಂಸೆಗೆ ಕಾರಣರಾದವರಿಗೆ ಅನಂತಾನಂತ ಅಭಿನಂದನೆಗಳು..

ಓ ನನ್ನ ಸ್ಪೂರ್ತಿಯೇ..............
ನನ್ನಲ್ಲಿ ನೀನಾಗಿ......
ನನ್ನೊಳಗೆ ಹಾಡಾಗಿ.....
ಹಾಡಲ್ಲಿ ಧ್ವನಿಯಾಗಿ......
ದನಿಯೊಳಗೆ ಸ್ವರವಾಗಿ....
ಸ್ವರದಲ್ಲಿ ಇಂಪಾಗಿ.....
ಇಂಪಲ್ಲಿ ತಂಪಾಗಿ......
ಕಂಪನ್ನು ತಂದವ(ನು)ಳು ನೀನು.......
ಎಲ್ಲಿರುವೆ ಈಗ?????
ನೀನಲ್ಲದಿದ್ಡರೂ ನನ್ನಲ್ಲಿ ಹಾಡಾಗಿ ಬಾ............

ಕೊನೆಯ ಹನಿ: ಭರವಸೆಯ ನುಡಿಗಳಿದ್ದರೆ ಏನನ್ನೂ ಸಾಧಿಸಬಹುದು.........
ಏನಂತೀರಿ?

No comments:

Post a Comment