Sunday, May 16, 2010

They win…Because they deserves that...!!!!

ಹೌದು…..ಅವರ ಆಟಕ್ಕೆ ನಾವು ಮೆಚ್ಚಲೇ ಬೇಕು….ಅವರಿಗೆ ಸೋಲು ಎನ್ನುವುದು ಮರೆತು ಹೋಗುವಷ್ಟರ ಮಟ್ಟಿಗೆ ಅವರು ಬೆಳೆದು ನಿಂತಿದ್ದಾರೆ….ರಿಕೀ ಪಾಂಟಿಂಗ್,ಮೆಕ್ಗ್ರಾತ್, ಹೇಡನ್, ಶೇನ್ ವಾರ್ನ್, ಆಡ್ಂ ಗಿಲ್ಕ್ರಿಸ್ಟ್ ಅವರಂತಹ ಅನುಭವೀ ಆಟಗಾರರ ಅನುಪಸ್ಥಿತಿಯ ನಡುವೆಯೂ ಅವರು ಸ್ಥಿರವಾದ ಪ್ರದರ್ಶನ ನೀಡುವಲ್ಲಿ ಸಫಲರಾಗಿದ್ದಾರೆ…..ಇದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಇತ್ತೀಚಿನ ಪ್ರದರ್ಶನ ಕಂಡಾಗ ನಮಗಾಗುವ ಅನುಭವ.. ದೇಶ ಯಾವುದೇ ಆಗಿರಲಿ, ತಂಡದ ನಿರ್ವಹಣೆಯನ್ನು ಆಧಾರವಾಗಿಟ್ಟುಕೊಂಡಾಗ ನನ್ನBlog ಗೆ ಅದೊಂದು Title ಆಗಲು ಕಾರಣವಾಯಿತು (ಕ್ರಿಕೆಟ್ ಮೇಲೆ ನನಗಿರುವ ಹುಚ್ಚು ಅಭಿಮಾನ ಇನ್ನೊಂದು ಕಾರಣವಾಗಿರಬಹುದು) J ಮೊನ್ನೆ ಮೊನ್ನೆ(೧೪/೦೫/೨೦೧೦) ನಡೆದ IPL ಎರಡನೇ ಸೆಮಿಫೈನಲ್ ಇದಕ್ಕೊಂದು ಉದಾಹರಣೆ(ಆಸ್ಟ್ರೇಲಿಯಾ vs ಪಾಕಿಸ್ತಾನ)…..ಪಾಕಿಸ್ತಾನ ಒಡ್ದಿದ 192 ರನ್ನುಗಳನ್ನು ಅಮೂಲ್ಯ ವಿಕೇಟ್ ಗಳನ್ನು ಕಳಕೊಂಡ ಮೇಲೂ ಅದನ್ನು ಬೆನ್ನಟ್ಟಿದ್ದು ನಿಜವಾಗಿಯೂ ಪ್ರಶಂಸನೀಯ…..ಅವರಲ್ಲಿ ಇರುವ Team spirit, ಆಟಗಾರರ ನಡುವಿನ ಪರಸ್ಪರ ಹೊಂದಾಣಿಕೆ, ಕಠಿಣ ಸಂದರ್ಭದಲ್ಲೂ ಗೆಲ್ಲುವೆವು ಎಂಬ ಆತ್ಮವಿಶ್ವಾಸ ಇವಕ್ಕೆಲ್ಲಾ ಕಾರಣವಾಗಿರಬಹುದು…..ಆಸ್ಟ್ರೇಲಿಯಾದ ವಿಕೇಟ್ಗಳು ಒಂದಾದ ನಂತರ ಒಂದು ಉರುಳುತ್ತಿದ್ದಾಗ ಪಾಕಿಸ್ತಾನಿ ಅಭಿಮಾನಿಗಳ ಸಂಭ್ರಮ,ಸಡಗರ ಅಷ್ಟಿಷ್ಟಲ್ಲ…ಆದರೆ ಮೈಕ್ ಹಸ್ಸಿಯು ಪಂದ್ಯದ ಗತಿಯನ್ನೇಬದಲಾಯಿಸಿದಾಗ ಮೂಕಪ್ರೇಕ್ಷಕರಂತೆ ತಮಗರಿವಿಲ್ಲದೆಯೇ, ಆಸ್ಟ್ರೇಲಿಯಾ ದ ಹೊಡೆತಕ್ಕೆ ಚಪ್ಪಾಳೆ ತಟ್ಟಿದ್ದು ಅವರ ಭಾವುಕತೆಗೆ ಸಾಕ್ಷಿಯಾಗಿತ್ತು…
They always win……Because they deserves that....!!!!

Sunday, May 9, 2010

ಹಾಗೆ ಸುಮ್ಮನೆ ಮೂಡಿದ ಕವನಗಳು(???????)

ಅಮ್ಮ:
ಅಮ್ಮಂದಿರ ದಿನವಾದ ಮೇ ೧೨ ಕ್ಕೆ, ಜಗತ್ತಿನ ಎಲ್ಲ ಅಮ್ಮಂದಿರಿಗಾಗಿ ಈ ಕವನ ……….
ನವಮಾಸ ಅಡಗಿಸಿ,
ನೋವನ್ನು ಅದುಮಿರಿಸಿ
ಪ್ರೀತಿಯಾ ಸುಧೆ ಹರಿಸಿ ಕಾಯುವಳು ಅವಳು…..
ಅವಳಿಲ್ಲದಿದ್ದರೆ ಈ ಜಗವು ನಿಶ್ಚಲ..
ನಮ ಬಾಳು ಎಂದೆಂದು ಅವಳಿಂದ ಉಜ್ವಲ…
ಸ್ವರ್ಗಕ್ಕೆ ಆ ಧೇನು
ಈ ಭುವಿಗೆ ಅಮ್ಮ
ನೀನಿಲ್ಲದಿದ್ದರೆ ಬಾಳು ಬರಡಮ್ಮ….
ದಾರಿಯಗಲಕ್ಕು ನಿನ್ನಭಯವೇ ಆಸರೆ,
ಈ ಬಾಳು ನಿನ್ನಾ ಪ್ರೀತಿಯಲಿ ಕೈಸೆರೆ
ಅಮ್ಮಾ ಎಂದೆನಲು ನಮಗೊಂದು ಶಕ್ತಿ
ಪ್ರೀತಿಯಾ ವರ ಪಡೆದು ಸಿಗಲೆಮಗೆ
ಮುಕ್ತಿ.........

೨. ಅರಿಯುವ ಮೊದಲೇ ಬರುವುದು ’ಪ್ರೀತಿ’….
ಕಾರಣ ಬೇಡ ನಿರಾಸೆಯ ’ಭೀತಿ’ ಯಿದ್ದರೂ…
ಸಾಗುವುದೆಂಬ ಭ್ರಮೆಯಲ್ಲಿ
ಓಡುತಿದೆ ಬಾಳ ಬಂಡಿ ಎತ್ತ ಕಡೆಗೋ….
ದಾರಿ ಮುಗಿದು ಹೋಗಿದೆ…ಮಾತು ಬರದಾಗಿದೆ…
ತಿಳಿಸುವ ಹಂಬಲವಿದ್ದರೂ ಬೇಡವೆನ್ನುತಿದೆ
ಈ ಮನವು……

೩. ಯಾರದೋ ರಾಗಕೆ ಮನ ಕುಣಿಯುತಿದೆ….
ಯಾವುದೋ ತಾಳಕೆ ಹೆಜ್ಜೆ ಹಾಕುತಿದೆ….
ಹೊಸತನದೆಡೆಗೆ ಹಂಬಲಿಸುತಿದೇ ಮನವು…
ಹಳೆ ನೆನಪುಗಳನ್ನು ಮರೆಯುತ್ತಾ..
ಇಂದಿನ ಹೊಸತು ನಾಳೆಗೆ ಹಳತೆಂಬ ಅರಿವಿದ್ದರೂ
ಈ ಹಂಬಲ( ಹುಡುಕಾಟ) ಸರಿಯೇ????
ತಿಳಿಯದಾಗಿದೆ ಈ ಪುಟ್ಟ ಹೃದಯಕೆ…...
೪.ನನ್ನಾಕೆ:
ಬಿಸಿಲಲ್ಲಿ ನೆರಳಾಗಿ ನಿದ್ದೆಯಲಿ ಕನಸಾಗಿ,
ಬರುವಳು ಇರುಳಲ್ಲಿ ಬೆಳದಿಂಗಳಾಗಿJ
ಹುಣ್ಣಿಮೆಯ ಶಶಿಯಂತೆ ಮಂದಹಾಸವನಿತ್ತು,
ನವಿಲಿನಾ ಗರಿಯಂಥ ಕೇಶ ರಾಶಿಯ ಹೊತ್ತು,
ಕಣ್ಣಿನಾ ನೋಟದಲೆ ಮರುಳು ಮಾಡುವಳು….
ತಂಗಾಳಿಯು ನನಗೆ ಅವಳಾ ಆ ಉಸಿರು,
ಜೀವಕ್ಕೆ ’ಪ್ರೇರಣೆ’ಯು ಅವಳಾ ಆ ಹೆಸರು…
ಅವಳು ಆರೂ ಅಲ್ಲ ಅವಳು ನನ್ನವಳು...
ನನ್ನ ಹೃದಯವ ಗೆದ್ದ ಚಿನ್ನದಾ ಗಣಿಯು.....
ದೇವತೆ:
ಕಣ್ಣಿಲ್ಲದವರಿಗೆ ದೂರದೃಷ್ಟಿಯು ಅವಳು…
ಮೂಗರ ಮನದೊಳಗೆ ಇಂಪಾದ ಹಾಡು...
ಸ್ಪೂರ್ತಿಯ ಕಡಲಿಗೆ ಈಕೆಯೇ ಒಡತಿ,
ಒಟ್ಟಾರೆ ಅವಳೊಂದು ಅದ್ಭುತ ಶಕ್ತಿ…
ಏಕಾಂಗಿ
ಸೂರ್ಯಚಂದ್ರರೂ ಒಂಟಿಯಲ್ಲವೇ??
ಅವರಿಗೂ ಈ ನೋವು ಕಾಡಿರಬಹುದೇ??
ಬೇಕಾದವರು ಇನ್ನೂ ಬೇಕೆಂದೆನಿಸಿದೆ…
ಇದು ಆಸೆಯೋ?? ನಿರಾಸೆಗೆ ದಾರಿಯೋ??ತಿಳಿಯದಾಗಿದೆL
ಹೃದಯ ಬಡಿತಕೆ ಮನವು ಹೆಜ್ಜೆ ಹಾಕದೆ,
ಏಕಾಂಗಿತನವನು ಒತ್ತಿ ಹೇಳುತಿದೆ……
ನಾವು ಸೋತರೂ, ನಮ್ಮ ಪರಿಶ್ರಮವು ಎಂದೂ ಸೋಲುವುದಿಲ್ಲ…
ನಾನು ಮೊದಲೇ ತಿಳಿಸಿದ ಹಾಗೆ MBA student life ನನ್ನ ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ಗಳಿಸಿತ್ತು. ನಾನು IFB ಕಂಪೆನಿಯಲ್ಲಿ placement ಆದ ನಂತರ ಸುಮಾರು ೫ ತಿಂಗಳುಗಳ ಕಾಲ ಮೈಸೂರಿನಲ್ಲಿ ಕೆಲಸ ಮಾಡಿದ್ದೆ. ಕಂಪೆನಿಯಂತು ತುಂಬಾ ಒಳ್ಳೆ ಹೆಸರನ್ನು ಗಳಿಸಿತ್ತಾದರೂ, ನನ್ನ work profile ನನಗೆ ಹಿಡಿಸಿರಲಿಲ್ಲ. ಆದ್ದರಿಂದ ಬೇರೆ ಕೆಲಸಗಳಿಗೆ try ಮಾಡುತ್ತಾ ಇದ್ದೆ. ಆಗಲೇ ನನಗೆ LIC ಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರ ಪರಿಚಯವಾಗಿ ಅವರ ಮೂಲಕ banking ಪರೀಕ್ಷೆಗೆ ತಯಾರಿ ನಡೆಸಲಾರಂಭಿಸಿದೆ. ನನ್ನ ಮೊದಲ ಸ್ಪರ್ಧಾತ್ಮಕ ಪರೇಕ್ಷೆ LIC ಯದ್ದಾಗಿತ್ತು. ತುಂಬಾ ಕಷ್ಟವಾಗಿದ್ದರಿಂದ ಪಾಸಾಗಲಿಲ್ಲ. ನಂತರ ದೃಢ ನಿರ್ಧಾರ ಮಾಡಿ ಪಾಸಾಗಲೇ ಬೇಕೆಂದು ಚೆನ್ನಾಗಿ ಓದತೊಡಗಿದೆ. ಪರಿಶ್ರಮಕ್ಕೆ ಫಲವಾಗಿ ಮುಂದಿನ ಎರಡು ಪರೀಕ್ಷೆಗಳಲ್ಲಿ ಪಾಸಾದೆ (J), ಮಾತ್ರವಲ್ಲ interview ನಲ್ಲೂ ಪಾಸಾದೆ. ಈಗ ನಾನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದೇನೆJJJJ..
ಆಗಲೇ ನನಗೆ HARD WORK ಎಂಬ ಪದದ ಅರ್ಥ ಗೊತ್ತಾಗಿದ್ದು….
“You may get fail…..But not your hardwork” ..ಏನಂತೀರಿ????
ತುಂಬಾ ಸಮಯದ ನಂತರ……….,
ನಿಜವಾದ ಗಳೆತನದ ಸವಿಯನ್ನು ಉಂಡ ಕಾಲ:
ನಾನು ಮೊದಲೇ ತಿಳಿಸಿದ ಹಾಗೆ ನಮ್ಮ ಕಾಲೇಜಿನಲ್ಲಿ ನಮ್ಮದೇ ಆದ ಗೆಳೆಯ ಗೆಳತಿಯರ ಗುಂಪು ಹುಟ್ಟಲು ಕಾರಣ ನಮ್ಮಲ್ಲಿದ್ದ ಸಮಾನತೆ. ಒಬ್ಬರನ್ನೊಬ್ಬರು ಮೀರಿಸುವಂತಹ tallent…….ನಾನು, ವಿನೋದ್, ಅಶ್ವಿನಿ, ವಿಜಿ, ಕಿಶೋರ್, ಲತಾ, ರಾಜಿ, ವಿನೀದ್, ಶ್ರೀಧರ್, ಶಾಂತಕುಮಾರ್, ಗಣೇಶ್,ವನಿತ……….
ಅಶ್ವಿನಿ ಭರತನಾಟ್ಯ ಪ್ರವೀಣೆಯಾದರೆ ಶಾಂತಕುಮಾರ್ ಹಾಗೂ ವಿಜಿ ಸಂಗೀತ ಸಾಮ್ರಾಟರಾಗಿದ್ದರು. ವಿನೋದ್, ವಿನೀದ್, ರಾಜಿ, ಕಿಶೊರ್ ಹಾಗೂ ಶ್ರೀಧರ್ subjects ನಲ್ಲಿ ತುಂಬಾ ಒಲವುಳ್ಳವರಾಗಿದ್ದರು. ಲತಾ ಅಂತೂ ನನ್ನ ಕೈಯ್ಯಿಂದ ಕೋರಸ್ ರಾಣಿ ಎಂಬ ಬಿರುದನ್ನು ಪಡೆದಿದ್ದಳು. (ಹಾಗೆ ಸುಮ್ಮನೆ ಚಿತ್ರದ ಟೈಟಲ್ song ಗೆ ಅವಳು ಸುಂದರವಾಗಿ ’ಕೋರಸ್’ ಹೇಳುತ್ತಿದ್ದಳು). ಮುಂಗಾರು ಮಳೆ ಜೋಡಿ ಎಂದೇ (ಕು)ಖ್ಯಾತಿ ಪಡೆದಿದ್ದ ಗಣೇಶ್ ಹಾಗೂ ವನಿತಾ ಜೋಡಿಯು ಪ್ರತಿ ದಿನವೂ ಕಾಲೇಜಿನ stepsಲ್ಲಿ ಕಾಲ ಕಳೆಯುತ್ತಿದ್ದರು!!!!! ಈ ವಿಷಯದಲ್ಲಿ ವಿನೀದ್ ಹಾಗೂ ರಾಜಿ ಜೋಡಿಯು ಅವರಿಗೆ ಸಮಾನ ಸ್ಪರ್ಧಿಗಳಾಗಿದ್ದರು.
ನಾವೆಲ್ಲರೂ ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಂಡಿದ್ದೆವು. ಇಂತಹ ಗೆಳೆತನವು ನನ್ನ ಕಲಿಕೆಯ ಅಂತ್ಯದಲ್ಲಿ ಒದಗಿ ಬರುವುದೆಂಬ ಕಲ್ಪನೆಯೂ ನನಗಿರಲಿಲ್ಲ…. ಯಾಕೆಂದರೆ,
ಗೆಳೆತನ ಹುಟ್ಟಲು ಕಾರಣಗಳು ಬೇಕಿಲ್ಲ….ಒಂದು ಹನಿ ಕಣ್ಣೇರು ಸಾಕು…ಸಾಂತ್ವಾನದ ನುಡಿಗಳು ಸಾಕು…..ಯಾರೂ ಇಲ್ಲದಾಗ ನಾನಿದ್ದೇನೆಂಬ ಭರವಸೆಯ ಮಾತುಗಳು ಸಾಕು……ಬೇಡವೆನ್ನುವ ಜೀವನಕ್ಕೆ ಬೇಕು ಎಂದು ಪ್ರೇರೇಪಿಸುವ ಸ್ಪೂರ್ತಿದಾಯಕವಾದ ಪ್ರೇರಣೆ ಸಾಕು….ನಮ್ಮದೂ ಅಂತಹುದೇ ಗೆಳೆತನವಾಗಿತ್ತು…ನಮ್ಮ ಗ್ರೂಪ್ ನಲ್ಲಿ ಯರಾದರೊಬ್ಬರು ಕಾಲೇಜಿಗೆ ಬರದೆ ಹೋದರೆ ಅವರ absence ಎದ್ದು ಕಾಣುತ್ತಿತ್ತು…!!ನನಗೆ IFB ಕಂಪೆನಿಯಲ್ಲಿ placement ಆದಾಗ ಖುಷಿ ಒಂದೆಡೆಯಾದರೆ, ಎಲ್ಲರನ್ನು ಬಿಟ್ಟು ಹೋಗಬೇಕೆಂಬ ನೋವು ಮತ್ತೊಂದೆಡೆ..!!!! ಈಗ ಎಲ್ಲರು ಅವರವರ ಕೆಲಸದಲ್ಲಿ busy ಯಾಗಿದ್ದರೂ, ಜಂಗಮವಾಣಿ(ಮೊಬೈಲು!!!) ನಮ್ಮನ್ನು ಪರಸ್ಪರರನ್ನಾಗಿಸುತ್ತಿದೆJJJ…

Monday, August 17, 2009

ಎನ್ನ ಮನೆಯ ಶುದ್ದಿಯಪ್ಪ…


ಎಂಗಳ ಮನೆಗೆ ಇಬ್ರು ಪ್ರಾಯದೋರು ಬಂದಿತ್ತಿದವು.ಅವು ಮಾತಾಡಿಗೊಂಡಿಪ್ಪಗ ಮೋರ್ (retail shop) ನ ಶುದ್ದಿ ಬಂತು….ಒಬ್ಬರು ಹೇಳಿದವು…..ಏ ಈಚಣ್ಣ ಈ ಮೋರ್ ಅಂಗಡಿಲಿ ಎಲ್ಲಾ ಸಾಮಾನುಗಳುದೇ ಸಿಕ್ಕುತ್ತು…..ಒಂದೇ ಪೆಟ್ಟಿಂಗೆ ಎಲ್ಲಾ ಸಾಮಾನುಗಳನ್ನೂ ರೂಢಿ ಮಾಡಲಕ್ಕು…..ಅಪ್ಪೊ….ಎನಗೆ ಗೊಂತೇ ಇತ್ತಿಲ್ಲೆ….ಅಷ್ಟಪ್ಪಗ ಎನ್ನ ಬಾಯಿ ಸುಮ್ಮನೆ ಕೂರೆಕ್ಕನ್ನೆ…..ಅಪ್ಪು ಅಜ್ಜ…ಇನ್ನು ರಜಾ ಸಮಯ ಹೋದರೆ ಮೋರ್ ಲಿ ಗಣಪತಿ ಹೋಮದ ಪ್ರಸಾದ, ಸಪಾದಭಕ್ಷ ಎಲ್ಲ ಸಿಕ್ಕುಗು………
JJJ

ಕಾಲಾಯ ತಸ್ಮೈ ನಮ:….ಎಂತ ಹೇಳ್ತಿ???ಆನು ಹೇಳಿದ್ದು ಸರಿ ಅಲ್ದಾ???....

Sunday, August 16, 2009

ನಗರದೆಲ್ಲೆಡೆ ಹಂದಿ ಜ್ವರದ ಭೀತಿ:

ಈಗ ಇಡೀ ಲೋಕವನ್ನೇ ತಲ್ಲಣಗೊಳಿಸಿರುವ ಹಂದಿಜ್ವರ ಎಂಬ ಭೂತ ಎಲ್ಲೆಡೆ ಹಬ್ಬಿದ್ದಲ್ಲದೇ ಕೆಲವರನ್ನು ಬಲಿ ತೆಗೆದುಕೊಂಡಿದ್ದು ನಿಮಗೆಲ್ಲಾ ಗೊತ್ತಿರುವ ವಿಚಾರವೇ.....ಈ ಬಗ್ಗೆ ಪತ್ರಕರ್ತನೊಬ್ಬ ಮಾನ್ಯ ಆರೋಗ್ಯ ಸಚಿವರನ್ನು ಪ್ರಶ್ನಿಸಿದಾಗ ಸಚಿವರ ಪ್ರತಿಕ್ರಿಯೆ ಈ ರೀತಿ ಇರಬಹುದೇ.......

ಪಾಪ ಸಚಿವರಾದರೋ ಏನು ಮಾಡಿಯಾರು????ಅಲ್ಲವೇ.....


ರತನ್ ಟಾಟಾ ಅಪ್ಪಚ್ಚಿ ಯ ತಿರುಗಾಟ:

ಪ್ರಸಿದ್ಧ ಉದ್ಯಮಿ ರತನ್ ಟಾಟಾ ಅವರು, ತಮ್ಮ ನೂತನ ಕಾರು ಉತ್ಪಾದನಾ ಘಟಕದ ನಿರ್ಮಾಣಕ್ಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮಮತಾ ಚಿಕ್ಕಮ್ಮನ ಹಠಮಾರಿತನದಿಂದ ಅವರ ಯೋಜನೆಗಳು ಪೂರ್ತಿ ತಲೆಕೆಳಗಾಯಿತು. ಆ ಸಂದರ್ಭದಲ್ಲಿ ನನ್ನ ಯೋಚನಾ ಲಹರಿ ಈ ಕೆಳಗಿನ ವ್ಯಂಗಚಿತ್ರಕ್ಕೆ ನಾಂದಿ ಹಾಡಿತು.
.....(click above the image to see full size)


ಕೊನೆಯ ಹನಿ: ಮಮತಾ ಬ್ಯಾನರ್ಜಿಯ ’ಎನರ್ಜಿ’ ನೋಡಿ ಟಾಟಾ ಅಪ್ಪಚ್ಚಿಗೆ ವರಕ್ಕೇ ಬೈಂದಿಲ್ಲಡ್ದ!!!!!!