Monday, August 17, 2009

ಎನ್ನ ಮನೆಯ ಶುದ್ದಿಯಪ್ಪ…


ಎಂಗಳ ಮನೆಗೆ ಇಬ್ರು ಪ್ರಾಯದೋರು ಬಂದಿತ್ತಿದವು.ಅವು ಮಾತಾಡಿಗೊಂಡಿಪ್ಪಗ ಮೋರ್ (retail shop) ನ ಶುದ್ದಿ ಬಂತು….ಒಬ್ಬರು ಹೇಳಿದವು…..ಏ ಈಚಣ್ಣ ಈ ಮೋರ್ ಅಂಗಡಿಲಿ ಎಲ್ಲಾ ಸಾಮಾನುಗಳುದೇ ಸಿಕ್ಕುತ್ತು…..ಒಂದೇ ಪೆಟ್ಟಿಂಗೆ ಎಲ್ಲಾ ಸಾಮಾನುಗಳನ್ನೂ ರೂಢಿ ಮಾಡಲಕ್ಕು…..ಅಪ್ಪೊ….ಎನಗೆ ಗೊಂತೇ ಇತ್ತಿಲ್ಲೆ….ಅಷ್ಟಪ್ಪಗ ಎನ್ನ ಬಾಯಿ ಸುಮ್ಮನೆ ಕೂರೆಕ್ಕನ್ನೆ…..ಅಪ್ಪು ಅಜ್ಜ…ಇನ್ನು ರಜಾ ಸಮಯ ಹೋದರೆ ಮೋರ್ ಲಿ ಗಣಪತಿ ಹೋಮದ ಪ್ರಸಾದ, ಸಪಾದಭಕ್ಷ ಎಲ್ಲ ಸಿಕ್ಕುಗು………
JJJ

ಕಾಲಾಯ ತಸ್ಮೈ ನಮ:….ಎಂತ ಹೇಳ್ತಿ???ಆನು ಹೇಳಿದ್ದು ಸರಿ ಅಲ್ದಾ???....

Sunday, August 16, 2009

ನಗರದೆಲ್ಲೆಡೆ ಹಂದಿ ಜ್ವರದ ಭೀತಿ:

ಈಗ ಇಡೀ ಲೋಕವನ್ನೇ ತಲ್ಲಣಗೊಳಿಸಿರುವ ಹಂದಿಜ್ವರ ಎಂಬ ಭೂತ ಎಲ್ಲೆಡೆ ಹಬ್ಬಿದ್ದಲ್ಲದೇ ಕೆಲವರನ್ನು ಬಲಿ ತೆಗೆದುಕೊಂಡಿದ್ದು ನಿಮಗೆಲ್ಲಾ ಗೊತ್ತಿರುವ ವಿಚಾರವೇ.....ಈ ಬಗ್ಗೆ ಪತ್ರಕರ್ತನೊಬ್ಬ ಮಾನ್ಯ ಆರೋಗ್ಯ ಸಚಿವರನ್ನು ಪ್ರಶ್ನಿಸಿದಾಗ ಸಚಿವರ ಪ್ರತಿಕ್ರಿಯೆ ಈ ರೀತಿ ಇರಬಹುದೇ.......

ಪಾಪ ಸಚಿವರಾದರೋ ಏನು ಮಾಡಿಯಾರು????ಅಲ್ಲವೇ.....


ರತನ್ ಟಾಟಾ ಅಪ್ಪಚ್ಚಿ ಯ ತಿರುಗಾಟ:

ಪ್ರಸಿದ್ಧ ಉದ್ಯಮಿ ರತನ್ ಟಾಟಾ ಅವರು, ತಮ್ಮ ನೂತನ ಕಾರು ಉತ್ಪಾದನಾ ಘಟಕದ ನಿರ್ಮಾಣಕ್ಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮಮತಾ ಚಿಕ್ಕಮ್ಮನ ಹಠಮಾರಿತನದಿಂದ ಅವರ ಯೋಜನೆಗಳು ಪೂರ್ತಿ ತಲೆಕೆಳಗಾಯಿತು. ಆ ಸಂದರ್ಭದಲ್ಲಿ ನನ್ನ ಯೋಚನಾ ಲಹರಿ ಈ ಕೆಳಗಿನ ವ್ಯಂಗಚಿತ್ರಕ್ಕೆ ನಾಂದಿ ಹಾಡಿತು.
.....(click above the image to see full size)


ಕೊನೆಯ ಹನಿ: ಮಮತಾ ಬ್ಯಾನರ್ಜಿಯ ’ಎನರ್ಜಿ’ ನೋಡಿ ಟಾಟಾ ಅಪ್ಪಚ್ಚಿಗೆ ವರಕ್ಕೇ ಬೈಂದಿಲ್ಲಡ್ದ!!!!!!

ಬೆಂಗಳೂರಿನಲ್ಲಿ ಕಳೆದ ನಾಲ್ಕು ತಿಂಗಳು:


ಫೆಬ್ರವರಿ 2008 ರ ವರೇಗೆ ನನ್ನ ಮನದಲ್ಲಿ ಬೆಂಗಳೂರು ಎಂಬುದು ಕೇವಲ ಕನಸಲ್ಲಿ ಬರುವ ನಗರಿಯಾಗಿತ್ತು. ಆದರೆ ಅದೇ ನಗರಿಯಲ್ಲಿ ನಾನು ನಾಲ್ಕು ತಿಂಗಳು ಕಳೆಯುತ್ತೆನೆಂದು ಕನಸಲ್ಲು ಅಂದುಕೊಂಡಿರಲಿಲ್ಲ!!!

ಇದಕ್ಕೆ ಕಾರಣವಾಗಿದ್ದು ನನ್ನ ಎಮ್.ಬಿ.ಎ ಕಾಲೇಜ್. ಪ್ರಥಮ ವರ್ಷದ 3ನೇ ಸೆಮಿಷ್ಟರ್ ಆದ ಮೇಲೆ ನಾಲ್ಕು ತಿಂಗಳು ಪ್ರೊಜೆಕ್ಟ್ ವರ್ಕ್ ಗಾಗಿ ಬೆಂಗಳೂರಿಗೆ ಹೋಗುವ ಪ್ಲಾನ್ ಮಾಡಿದೆ. ಹೋಗುವ ವಿಚಾರವೇನೋ ಸರಿ……ಆದರೆ????? ಬೆಂಗಳೂರನ್ನು ಖಾಲಿ ಪೇಪರ್ನಲ್ಲಿ ಓದಿ ತಿಳಿದಿದ್ದ ನನಗೆ ಅದರ ನಿಜವಾದ ಚಿತ್ರಣವಿರಲಿಲ್ಲ. ಹನುಮಂತನಗರ ಎಂದು ಪೇಪೆರ್ನಲ್ಲಿ ಓದಿದರೆ, ಕೂಡಲೇ ಅದು ಹೇಗಿರಬಹುದು???ಅಲ್ಲಿ ಹನುಮಂತನಿರಬಹುದೇ???ಅಲ್ಲೆಲ್ಲಾ ಸಿನಿಮಾ ನಟ ನಟಿಯರು ಓಡಾಡುತ್ತಲೇ ಇರಬಹುದೇ??? ಎಂಬೆಲ್ಲಾ ಯೋಚನೆಗಳು ಮೂಡುತ್ತಿದ್ದವು..

ಬೆಂಗಳೂರು ಎಲ್ಲಿದೆ?? ಹೇಗಿದೆ??? ಯಾರೂ ಪರಿಚಯದವರಿಲ್ಲದ ಆ ಊರಲ್ಲಿ ನಾಲ್ಕು ತಿಂಗಳು ಎಂದರೆ?????? ಈ ಎಲ್ಲಾ ಪ್ರಶ್ನೆಗಳು ಹುಟ್ಟಿಕೊಂಡರೂ ಧೈರ್ಯ ಮಾಡಿ ಹೋಗುವ ನಿರ್ಧಾರ ಮಾಡಿದೆ….ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರಕಿದ್ದು ನಮ್ಮ ಪಿ. ಜಿ ಗೆಳೆಯರಾದ ವಿಪ್ರಭ ( ವಿಷ್ಣು ಪ್ರಸಾದ್ ಭಟ್) ಅವರು 9448472292 ನಂ. ಕೊಟ್ಟು ಕೋಂಟ್ಯಾಕ್ಟ್ ಆಗಲು ಹೇಳಿದಾಗ. ಆ ನಂಬರ್ ನನ್ನ ಗುರುಗಳದ್ದಾಗಿತ್ತು……ನನಗಾದ ಖುಷಿಗೆ ಪಾರವೇ ಇಲ್ಲ. ಫೋನ್ ಮಾಡಿ ಮಾತಾಡಿ ಎಲ್ಲ ವಿವರಿಸಿದ ನಂತರ ಅವರ (ಅರ)ಮನೆಯಲ್ಲಿರಲು ಪೂರ್ಣ ಪ್ರಮಾಣದ ಒಪ್ಪಿಗೆ ಸಿಕ್ಕಿತು. ಹಾಗೆ ನಾಲ್ಕು ತಿಂಗಳ ಬೆಂಗಳೂರಿನ ಪ್ರೊಜೆಕ್ಟ್ ವರ್ಕ್ ತುಂಬಾ ಅನುಭವಗಳನ್ನು ತಂದುಕೊಟ್ಟಿತು. That Bangalore project work has given me such a good exposure and I have learned a lot……ಈಗ ಬೆಂಗಳೂರು ಅಂದರೆ ನನಗೆ ಆಚಮನೆ ಇದ್ದ ಹಾಗೆ!!!!!! ಇದಕ್ಕೆಲ್ಲಾ ಕಾರಣರಾದ ನನ್ನ ಗುರುಗಳಿಗೆ (ಮಹೇಶ ಎಳ್ಳ್ಯಡ್ಕ )ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ……

ಈಗ ಈಗ ಬೆಂಗಳೂರು ಹೆಸರು ಕೇಳಿದರೆ ಅದೇನೋ ಅಸಹ್ಯ…..ಎಲ್ಲಿ ನೋಡಿದರೂ ಗಬ್ಬು ಗಬ್ಬು…..ಟ್ರಾಫಿಕ್.. ಟ್ರಾಫಿಕ್….ವಾಹನಗಳೆಂದರೆ ನಮ್ಮ ಊರಿನಲ್ಲಿ ಮಳೆಗಾಲದ “ ಬೆಳ್ಳ” ಹೋದ ಹಾಗೆ ಎಲ್ಲೆಂದರಲ್ಲಿ ನುಗ್ಗುತ್ತವೆ… ಇಲ್ಲಿ ಕಸದ ರಾಶಿಯಲ್ಲಿ ನಾಯಿಗಳಿಗೂ ಸ್ವಾತಂತ್ರ ಇಲ್ಲ!!!… ( ಮನುಷ್ಯರೇ ಅವರಿಗಿಂತ ಮೊದಲು ಹಾಜರಿರ್ತಾರೆ)!!!!!!!!!! ನಾನು ಮೇಲೆ ಹೇಳಿದ್ದು ನಿಮ್ಮ ಗಮನಕ್ಕೂ ಬಂದಿರಬಹುದಲ್ಲವೇ…….

ಕೊನೆಯ ಹನಿ:ಈಗ ಎನ್ನ ಐದು ಸೋದರತ್ತೆಕ್ಕಳ ಬಾಯಿಲಿ ಒಂದೇ ಶುದ್ದಿ……ಬಾಲ ಬೆಂಗಳೂರಿಂಗೆ ಹೋಯಿದ ಅಡ್ಡ ಹೇಳಿ………:):):)

ಅಮ್ಮ:

ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲಎಂಬುದು ಅಕ್ಷರಷಃ ಸತ್ಯ. ಆಕೆಯನ್ನು ಮೀರಿಸುವ ಬಂಧುಗಳು ಖಂಡಿತ ಇರಲು ಸಾಧ್ಯವಿಲ್ಲ. “ಕುಪುತ್ರೋ ಜಾಯೇತಕ್ವಚಿದಪಿ ಕುಮಾತಾ ಭವತಿ” ಎಂಬ ಮಾತಿನಂತೆ, ಕೆಟ್ಟ ತಾಯಿಯು ಈ ಜಗತ್ತಲ್ಲಿ ಕಾಣುವುದು ಅತಿ ವಿರಳ ( ಇಲ್ಲವೆಂದರೂ ತಪ್ಪಾಗಲಾರದು). ಹೀಗಿರುವ ಅಮ್ಮನನ್ನು ದೇವತೆ ಎಂದರೆ ತಪ್ಪಾಗಲಾರದಲ್ಲವೇ??? ಅದಕ್ಕಾಗಿ ಅಮ್ಮನಿಗೆ ಈ ಸಾಲು......

ಯಾರು ಹೇಳಿದವರು???
ದೇವರು(ತೆ) ಕಣ್ಣಿಗೆ ಕಾಣಿಸುವುದಿಲ್ಲವೆಂದು???
ಕಂಡಿಲ್ಲವೇ ಅವರು ಹೆತ್ತ ಅಮ್ಮನನ್ನು??


ಕೊನೆಯ ಹನಿ: ಆನು ಎನ್ನ ಅಮ್ಮನ ಕೊಂಗಾಟದ ಮಗ ಅಡ್ಡ.........











Friday, August 14, 2009

ಪೂಜೆ ಮಾಪಣ್ಣನ ಮನೆ “ಸನ್ನಿವಾಸ” ಆದ್ದು:

ಪೂಜೆ ಮಾಪಣ್ಣ ಹೇಳುವ ಹೆಸರು ಕೇಳಿದರೆ ಎಲ್ಲೋರಿಂಗುದೆ ಅಂದಾಜಿ ಮಾಡಲಕ್ಕು ಅವರ ಮನೆ ಹೇಂಗಿಕ್ಕು ಹೇಳಿ……ಬಡತನದ ಪರಾಮಾವಧಿ ಹೇಳಿತೀರ…..ತುಂಬಾ ಸಣ್ಣ ಮನೆ ಅದು. ದೇವಸ್ಥಾನಲ್ಲಿ ಸಿಕ್ಕುವ ಎರಡು ರೂಪಾಯಿ ತೀರ್ಥ ಕಾಣಿಕೆದೆ , ವಾರಕ್ಕೆ ಒಂದೋ ಎರಡೋ ಬಪ್ಪ ಬ್ರಾಹ್ಮಣಾರ್ಥಲ್ಲಿ ಮನೆಯೋರೆಲ್ಲ ನೋಡಿಗೊಂಡಿತ್ತ ಕಾಲ ಅಲ್ಲದ…ಮನೆ ಕಟ್ಟುದು ಕನಸಿಲಿ ಸಾನೂ ಬಂದಿರ ಅಜ್ಜಂಗೆ!!!! ಆ ಮನೆ ಮೂಡಬಿದಿರೆಯ ಸಾವಿರ ಕಂಬದ ಬಸದಿಯೊಟ್ಟಿಂಗೆ ಸರಿಯಾಗಿ ಸ್ಪರ್ಧಿಸುತ್ತಿತ್ತು. ಎಲ್ಲಿ ನೊಡಿದರೂ ಕಂಬಂಗಳದ್ದೆ ವೈಭವ…

ಎನ್ನ ಅಪ್ಪನೂ ಅಷ್ಟೆ..ಹಗಲಿಡೀ ತೋಟದ ಕೆಲಸ ಮಾಡಿ ಮನೆಯ ಪೂಜೆ ಮಾಡಿ, ಊಟ ಮಾಡಿದ ನಂತರ ಗಡದ್ದಿಲಿ ಒಂದು ವರಗಿ ಹೊತ್ತಪ್ಪಗಾಣ ಚಾಯ ಕುಡಿದು ಪುನ: ತೋಟಕ್ಕೆ ಹಾಜರ್…ಅಜ್ಜನ ಕೈಂದ ಪುರುಸೊತ್ತಿಪ್ಪಗ ಮಂತ್ರ ಕಲ್ತುಗೊಂಡು, ಸಣ್ಣ ಸಣ್ಣ ವೈದಿಕ ಕಾರ್ಯಕ್ರಮಂಗೊಕ್ಕೆ ಹೋಯಿಗೊಂಡಿತ್ತಿದ್ದವು. ಅಜ್ಜಂಗೆ ಇಬ್ರು ಗೆಂಡು ಮಕ್ಕಳುದೇ, ೫ ಹೆಣ್ಣು ಮಕ್ಕಳುದೆ…ಮೇಲೆ ಹೇಳಿದ ಹಾಂಗೆ ಇವರೆಲ್ಲರ ಸಾಂಕುಲೆ ಎರಡು ರೂಪಾಯಿ ತೀರ್ಥ ಕಾಣಿಕೆದೆ, ಬ್ರಾಹ್ಮಣಾರ್ಥ ದಕ್ಷಿಣೆದೆ ಸಾಕಾಯಿಗೊಂಡಿತ್ತಡ್ದ!!!!!!!! ಅಣ್ಣ ತಮ್ಮಂದ್ರು ಮದುವೆ ಆದ ಮತ್ತೆ ಪಾಲಾದವು. ಅಪ್ಪನೊಟ್ಟಿಂಗೆ ಅಜ್ಜ ಉಳುಕ್ಕೊಂಡವು. ಅಪ್ಪ ಜಯಲಕ್ಷ್ಮಿ ಹೇಳುವ ಕನ್ಯೆಯ ಮದುವೆ ಆದ ಮತ್ತೆ ಮನೆಯ ಸ್ವರೂಪ ರಜ ರಜವೇ ಚೇಂಜ್ ಅಪ್ಪಲೆ ಶುರು ಆತು…(ನಿಜವಾಗಿಯೂ ಅಪ್ಪ ಲಕ್ಷ್ಮಿಯನ್ನೇ ವರಿಸಿದ್ದವು!!) ಈಗಾಣ ಅಮ್ಮಂದ್ರಿಂಗೆ ಒಂದು ಹೆರುವಗಳೆ ಕೈಕ್ಕಾಲು ಬೀಳ್ತಡ್ಡ. ಅಂತದ್ರಲ್ಲಿ ಏಳು ಮಕ್ಕಳ ಹೆತ್ತ ಎನ್ನ ಅಮ್ಮ ನಿಜವಾಗಿಯು ಗ್ರೇಟ್ …ಅಜ್ಜನ ಮನೆಗೆ ಹೊಪಗಂತೂ ಏಳು ಮಕ್ಕಳನ್ನು ಕರಕ್ಕೊಂಡು ಹೇಂಗೆ ನಿಭಾಯಿಸಿದ್ದೋ??? ದೇವರಿಂಗೊಬ್ಬಂಗೇ ಗೊಂತು . ಅಮ್ಮ, ಎನಗೆ ಅದು ಬೇಕು…ಇದು ಬೇಕು ಹೇಳಿ ಹಟ ಮಾಡಿಗೊಂಡಿತ್ತದು ಎನಗೆ ಈಗಳೂ ನೆನಪಾವ್ತು,…..

ಪೈಸೆ ಪ್ರೋಬ್ಲೆಮ್ ಇದ್ದ ಕಾರಣ ಕಲಿವಲೆ ಹುಷಾರಿದ್ದರೂ ಅಪ್ಪ ಆರನ್ನೂ ಜಾಸ್ತಿ ಕಲಿಸಿದ್ದವಿಲ್ಲೆ. ಉಪನಯನ ಮಾಡಿಸಿ ಎಲ್ಲರನ್ನೂ ಮಂತ್ರಪಾಠ ಕಲಿವಲೆ ಕಳಿಸಿದವು…..ಎಲ್ಲವೂ ಗ್ರೇಶಿದಾಂಗೆ ಆವುತಿತ್ತರೆ ಎನ್ನ ದೊಡ್ದ ಅಣ್ಣ ಈಗ ಯಾವುದಾದರೂ ದೊಡ್ದಕಾಲೇಜಿಲಿ ಪ್ರೊಫೆಸರ್ ಆಗಿರ್ತಿತ್ತ...ಪಿ. ಯು. ಸಿ ಲಿ ಸಯನ್ಸ್ ತೆಕ್ಕೊಂಡುದೇ ಪಾಸಾಯಿದ ಹೇಳೀರೆ ( ೬೦%) ಈ ವಿಚಾರವ ಅಂದಾಜು ಮಾಡಲಕ್ಕು. ಮಂತ್ರ ಕಲ್ತು ಎಲ್ಲೋರುದೆ ವೈದಿಕಕ್ಕೆ ಇಳುದ ಮೇಲೆ ಎಂಗ ರಜಾ ಮೇಲೆ ಬಿದ್ದೆಯ. ಹಾಂಗೆ ಮುಂದೆ ಸಾಗಿ ಸಾಗಿ ಮನೆ ಕಟ್ಟುದು ಹೇಳುವ ತೀರ್ಮಾನಕ್ಕೆ ಬಂದೆಯ. ಇದಕ್ಕೆಲ್ಲಾ ಕಾರಣ ಎನ್ನ ಎರಡನೇ ಅಣ್ಣ ಭೀಮ ಪ್ರಕಾಶ. ಎಲ್ಲೋರ ಪರಿಶ್ರಮದ ಫಲವಾಗಿ ೨೦೦೩-೦೪ ರಲ್ಲಿ ಮನೆ ಕಟ್ಟಿ ಆತು. ಮನೆಯ ಪಿಲ್ಲರಿನ ಪಾಯ ತೆಗವಗ ದೇವರು ಒಲಿದು ಮಣ್ಣಿನಡಿಲಿ ಬೆಳ್ಳಿಕವಚ ಸಹಿತವಾದ ಶಿವಲಿಂಗ ಸಿಕ್ಕಿದ್ದು ಖುಷಿಯ ದುಪ್ಪಟ್ಟು ಮಾಡಿತ್ತು. ಗುರುಗಳ ಹತ್ರ ಹೋಗಿ ಮನೆಯ ಹೆಸರು ಎಂತ ಅಕ್ಕು ಹೇಳಿ ಕೇಳಿ ಅಪ್ಪಗ, ಅಣ್ಣನ ಹತ್ರೆ ಒಂದು ಸಂಖ್ಯೆ ಹೇಳುಲೆ ಹೇಳಿದವು. ಅಣ್ಣ “೯” ಹೇಳಿ ಹೇಳಿ ಅಪ್ಪಗ “ಸನ್ನಿವಾಸ” ಹೇಳಿ ಆಶೀರ್ಮಂತ್ರಾಕ್ಷತೆ ಕೊಟ್ಟವು. ಸನ್ನಿವಾಸ ಹೇಳೀರೆ ಸಜ್ಜನರ ನಿವಾಸ ಹೇಳಿ ಅರ್ಥ ಅಡ್ಡ. (ಸಾತ್-ನಿವಾಸ ಹೇಳಿದರೂ ತಪ್ಪಾಗ, ಎಂತಾ ಹೇಳೀರೆ ಎಂಗ ಒಟ್ಟು ೭ ಜನ ಮಕ್ಕ ಹಾಂಗಾಗಿ…)

ಹಾಂಗೆ ಪೂಜೆ ಮಾಪಣ್ಣನ ಮನೆ ಈಗ ಸನ್ನಿವಾಸ ಆಯಿದು.

ಕೊನೆಯ ಹನಿ: ’ಸನ್ನಿವಾಸ’ ಮನೆ ಕಟ್ಟಿದ ಮೇಲೆ ಕೆಲವರ ಕಣ್ಣು ಕೆಂಪಾಯಿದು ಹೇಳಿ ಶುದ್ದಿ..:)JJJ