Friday, August 14, 2009

ಕರುಣಾಮಯಿ:


ಕಾಮಧೇನು ಎಂದರೆ ಕೇಳಿದ್ದನ್ನು ಕೊಡುವಾಕೆ. ಆಕೆ ಸ್ವರ್ಗ ನಿವಾಸಿನಿ.ಕೇಳಿದ್ದನ್ನು ಕೊಡುತ್ತಾಳೆ ನಿಜ..ಆದರೆ ಕಣ್ಣಿಗೆ ಕಾಣಿಸುವುದಿಲ್ಲವಲ್ಲಾ. ಅದೇ ಕಾಮಧೇನುವನ್ನು ಅಮ್ಮನಿಗೆ ಹೋಲಿಸಿದರೆ??? ನನ್ನ ಪ್ರಕಾರ ಈ ಹೋಲಿಕೆ ಅಷ್ಟು ಸಮಂಜಸವಲ್ಲ. ಏಕೆಂದರೆ,

ಕೇಳಿದ್ದನ್ನು ಕೊಡುವವಳು ಕಾಮಧೇನು…

ಆಕೆ ಕಣ್ಣಿಗೆ ಕಾಣಿಸದ ದೇವತೆ…

ಕೇಳಿದ್ದನ್ನೂ, ಕೇಳದ್ದನ್ನೂ ಕೊಡುವವಳು ಅಮ್ಮ..

ಈಕೆ ಕಣ್ಣಿಗೆ ಕಾಣುವ ದೇವತೆ……

ಮುಖವನ್ನು ಮನಸ್ಸಿನ ಕನ್ನಡಿ ಎಂದು ಹೇಳುತ್ತಾರೆ. ಈ ಮಾತಿಗೆ ತಕ್ಕಂತೆ, ನಮ್ಮ ಮುಖದಲ್ಲಾಗುವ ಬದಲಾವಣೆಗಳಿಂದಲೇ ನಮ್ಮ ಅಂತರಾಳದ ನೋವನ್ನ ನಮ್ಮಮ್ಮ ಕಂಡುಹಿಡಿಯುತ್ತಾಳೆ. ಹಾಗಾಗಿ ಮನಸ್ಸನ್ನು ಓದುವ ಶಕ್ತಿ ಅವಳಿಗೊಬ್ಬಳಿಗೇ ಇರುವುದು. ನನಗೆ ಈ ರೀತಿಯ ಅನುಭವಗಳು ಅವೆಷ್ಟೋ ಆಗಿವೆ. (ಎಂತ ಬಾಲೋ ಎಂದು ಮೋರೆ ಚಪ್ಪೆ ಚಪ್ಪೆ ಇದ್ದು?? ಎಂತಾತು ಕಾಲೇಜಿಲಿ???)…..

No comments:

Post a Comment