Friday, August 14, 2009

ಪೂಜೆ ಮಾಪಣ್ಣನ ಮನೆ “ಸನ್ನಿವಾಸ” ಆದ್ದು:

ಪೂಜೆ ಮಾಪಣ್ಣ ಹೇಳುವ ಹೆಸರು ಕೇಳಿದರೆ ಎಲ್ಲೋರಿಂಗುದೆ ಅಂದಾಜಿ ಮಾಡಲಕ್ಕು ಅವರ ಮನೆ ಹೇಂಗಿಕ್ಕು ಹೇಳಿ……ಬಡತನದ ಪರಾಮಾವಧಿ ಹೇಳಿತೀರ…..ತುಂಬಾ ಸಣ್ಣ ಮನೆ ಅದು. ದೇವಸ್ಥಾನಲ್ಲಿ ಸಿಕ್ಕುವ ಎರಡು ರೂಪಾಯಿ ತೀರ್ಥ ಕಾಣಿಕೆದೆ , ವಾರಕ್ಕೆ ಒಂದೋ ಎರಡೋ ಬಪ್ಪ ಬ್ರಾಹ್ಮಣಾರ್ಥಲ್ಲಿ ಮನೆಯೋರೆಲ್ಲ ನೋಡಿಗೊಂಡಿತ್ತ ಕಾಲ ಅಲ್ಲದ…ಮನೆ ಕಟ್ಟುದು ಕನಸಿಲಿ ಸಾನೂ ಬಂದಿರ ಅಜ್ಜಂಗೆ!!!! ಆ ಮನೆ ಮೂಡಬಿದಿರೆಯ ಸಾವಿರ ಕಂಬದ ಬಸದಿಯೊಟ್ಟಿಂಗೆ ಸರಿಯಾಗಿ ಸ್ಪರ್ಧಿಸುತ್ತಿತ್ತು. ಎಲ್ಲಿ ನೊಡಿದರೂ ಕಂಬಂಗಳದ್ದೆ ವೈಭವ…

ಎನ್ನ ಅಪ್ಪನೂ ಅಷ್ಟೆ..ಹಗಲಿಡೀ ತೋಟದ ಕೆಲಸ ಮಾಡಿ ಮನೆಯ ಪೂಜೆ ಮಾಡಿ, ಊಟ ಮಾಡಿದ ನಂತರ ಗಡದ್ದಿಲಿ ಒಂದು ವರಗಿ ಹೊತ್ತಪ್ಪಗಾಣ ಚಾಯ ಕುಡಿದು ಪುನ: ತೋಟಕ್ಕೆ ಹಾಜರ್…ಅಜ್ಜನ ಕೈಂದ ಪುರುಸೊತ್ತಿಪ್ಪಗ ಮಂತ್ರ ಕಲ್ತುಗೊಂಡು, ಸಣ್ಣ ಸಣ್ಣ ವೈದಿಕ ಕಾರ್ಯಕ್ರಮಂಗೊಕ್ಕೆ ಹೋಯಿಗೊಂಡಿತ್ತಿದ್ದವು. ಅಜ್ಜಂಗೆ ಇಬ್ರು ಗೆಂಡು ಮಕ್ಕಳುದೇ, ೫ ಹೆಣ್ಣು ಮಕ್ಕಳುದೆ…ಮೇಲೆ ಹೇಳಿದ ಹಾಂಗೆ ಇವರೆಲ್ಲರ ಸಾಂಕುಲೆ ಎರಡು ರೂಪಾಯಿ ತೀರ್ಥ ಕಾಣಿಕೆದೆ, ಬ್ರಾಹ್ಮಣಾರ್ಥ ದಕ್ಷಿಣೆದೆ ಸಾಕಾಯಿಗೊಂಡಿತ್ತಡ್ದ!!!!!!!! ಅಣ್ಣ ತಮ್ಮಂದ್ರು ಮದುವೆ ಆದ ಮತ್ತೆ ಪಾಲಾದವು. ಅಪ್ಪನೊಟ್ಟಿಂಗೆ ಅಜ್ಜ ಉಳುಕ್ಕೊಂಡವು. ಅಪ್ಪ ಜಯಲಕ್ಷ್ಮಿ ಹೇಳುವ ಕನ್ಯೆಯ ಮದುವೆ ಆದ ಮತ್ತೆ ಮನೆಯ ಸ್ವರೂಪ ರಜ ರಜವೇ ಚೇಂಜ್ ಅಪ್ಪಲೆ ಶುರು ಆತು…(ನಿಜವಾಗಿಯೂ ಅಪ್ಪ ಲಕ್ಷ್ಮಿಯನ್ನೇ ವರಿಸಿದ್ದವು!!) ಈಗಾಣ ಅಮ್ಮಂದ್ರಿಂಗೆ ಒಂದು ಹೆರುವಗಳೆ ಕೈಕ್ಕಾಲು ಬೀಳ್ತಡ್ಡ. ಅಂತದ್ರಲ್ಲಿ ಏಳು ಮಕ್ಕಳ ಹೆತ್ತ ಎನ್ನ ಅಮ್ಮ ನಿಜವಾಗಿಯು ಗ್ರೇಟ್ …ಅಜ್ಜನ ಮನೆಗೆ ಹೊಪಗಂತೂ ಏಳು ಮಕ್ಕಳನ್ನು ಕರಕ್ಕೊಂಡು ಹೇಂಗೆ ನಿಭಾಯಿಸಿದ್ದೋ??? ದೇವರಿಂಗೊಬ್ಬಂಗೇ ಗೊಂತು . ಅಮ್ಮ, ಎನಗೆ ಅದು ಬೇಕು…ಇದು ಬೇಕು ಹೇಳಿ ಹಟ ಮಾಡಿಗೊಂಡಿತ್ತದು ಎನಗೆ ಈಗಳೂ ನೆನಪಾವ್ತು,…..

ಪೈಸೆ ಪ್ರೋಬ್ಲೆಮ್ ಇದ್ದ ಕಾರಣ ಕಲಿವಲೆ ಹುಷಾರಿದ್ದರೂ ಅಪ್ಪ ಆರನ್ನೂ ಜಾಸ್ತಿ ಕಲಿಸಿದ್ದವಿಲ್ಲೆ. ಉಪನಯನ ಮಾಡಿಸಿ ಎಲ್ಲರನ್ನೂ ಮಂತ್ರಪಾಠ ಕಲಿವಲೆ ಕಳಿಸಿದವು…..ಎಲ್ಲವೂ ಗ್ರೇಶಿದಾಂಗೆ ಆವುತಿತ್ತರೆ ಎನ್ನ ದೊಡ್ದ ಅಣ್ಣ ಈಗ ಯಾವುದಾದರೂ ದೊಡ್ದಕಾಲೇಜಿಲಿ ಪ್ರೊಫೆಸರ್ ಆಗಿರ್ತಿತ್ತ...ಪಿ. ಯು. ಸಿ ಲಿ ಸಯನ್ಸ್ ತೆಕ್ಕೊಂಡುದೇ ಪಾಸಾಯಿದ ಹೇಳೀರೆ ( ೬೦%) ಈ ವಿಚಾರವ ಅಂದಾಜು ಮಾಡಲಕ್ಕು. ಮಂತ್ರ ಕಲ್ತು ಎಲ್ಲೋರುದೆ ವೈದಿಕಕ್ಕೆ ಇಳುದ ಮೇಲೆ ಎಂಗ ರಜಾ ಮೇಲೆ ಬಿದ್ದೆಯ. ಹಾಂಗೆ ಮುಂದೆ ಸಾಗಿ ಸಾಗಿ ಮನೆ ಕಟ್ಟುದು ಹೇಳುವ ತೀರ್ಮಾನಕ್ಕೆ ಬಂದೆಯ. ಇದಕ್ಕೆಲ್ಲಾ ಕಾರಣ ಎನ್ನ ಎರಡನೇ ಅಣ್ಣ ಭೀಮ ಪ್ರಕಾಶ. ಎಲ್ಲೋರ ಪರಿಶ್ರಮದ ಫಲವಾಗಿ ೨೦೦೩-೦೪ ರಲ್ಲಿ ಮನೆ ಕಟ್ಟಿ ಆತು. ಮನೆಯ ಪಿಲ್ಲರಿನ ಪಾಯ ತೆಗವಗ ದೇವರು ಒಲಿದು ಮಣ್ಣಿನಡಿಲಿ ಬೆಳ್ಳಿಕವಚ ಸಹಿತವಾದ ಶಿವಲಿಂಗ ಸಿಕ್ಕಿದ್ದು ಖುಷಿಯ ದುಪ್ಪಟ್ಟು ಮಾಡಿತ್ತು. ಗುರುಗಳ ಹತ್ರ ಹೋಗಿ ಮನೆಯ ಹೆಸರು ಎಂತ ಅಕ್ಕು ಹೇಳಿ ಕೇಳಿ ಅಪ್ಪಗ, ಅಣ್ಣನ ಹತ್ರೆ ಒಂದು ಸಂಖ್ಯೆ ಹೇಳುಲೆ ಹೇಳಿದವು. ಅಣ್ಣ “೯” ಹೇಳಿ ಹೇಳಿ ಅಪ್ಪಗ “ಸನ್ನಿವಾಸ” ಹೇಳಿ ಆಶೀರ್ಮಂತ್ರಾಕ್ಷತೆ ಕೊಟ್ಟವು. ಸನ್ನಿವಾಸ ಹೇಳೀರೆ ಸಜ್ಜನರ ನಿವಾಸ ಹೇಳಿ ಅರ್ಥ ಅಡ್ಡ. (ಸಾತ್-ನಿವಾಸ ಹೇಳಿದರೂ ತಪ್ಪಾಗ, ಎಂತಾ ಹೇಳೀರೆ ಎಂಗ ಒಟ್ಟು ೭ ಜನ ಮಕ್ಕ ಹಾಂಗಾಗಿ…)

ಹಾಂಗೆ ಪೂಜೆ ಮಾಪಣ್ಣನ ಮನೆ ಈಗ ಸನ್ನಿವಾಸ ಆಯಿದು.

ಕೊನೆಯ ಹನಿ: ’ಸನ್ನಿವಾಸ’ ಮನೆ ಕಟ್ಟಿದ ಮೇಲೆ ಕೆಲವರ ಕಣ್ಣು ಕೆಂಪಾಯಿದು ಹೇಳಿ ಶುದ್ದಿ..:)JJJ


No comments:

Post a Comment