Sunday, May 9, 2010

ಹಾಗೆ ಸುಮ್ಮನೆ ಮೂಡಿದ ಕವನಗಳು(???????)

ಅಮ್ಮ:
ಅಮ್ಮಂದಿರ ದಿನವಾದ ಮೇ ೧೨ ಕ್ಕೆ, ಜಗತ್ತಿನ ಎಲ್ಲ ಅಮ್ಮಂದಿರಿಗಾಗಿ ಈ ಕವನ ……….
ನವಮಾಸ ಅಡಗಿಸಿ,
ನೋವನ್ನು ಅದುಮಿರಿಸಿ
ಪ್ರೀತಿಯಾ ಸುಧೆ ಹರಿಸಿ ಕಾಯುವಳು ಅವಳು…..
ಅವಳಿಲ್ಲದಿದ್ದರೆ ಈ ಜಗವು ನಿಶ್ಚಲ..
ನಮ ಬಾಳು ಎಂದೆಂದು ಅವಳಿಂದ ಉಜ್ವಲ…
ಸ್ವರ್ಗಕ್ಕೆ ಆ ಧೇನು
ಈ ಭುವಿಗೆ ಅಮ್ಮ
ನೀನಿಲ್ಲದಿದ್ದರೆ ಬಾಳು ಬರಡಮ್ಮ….
ದಾರಿಯಗಲಕ್ಕು ನಿನ್ನಭಯವೇ ಆಸರೆ,
ಈ ಬಾಳು ನಿನ್ನಾ ಪ್ರೀತಿಯಲಿ ಕೈಸೆರೆ
ಅಮ್ಮಾ ಎಂದೆನಲು ನಮಗೊಂದು ಶಕ್ತಿ
ಪ್ರೀತಿಯಾ ವರ ಪಡೆದು ಸಿಗಲೆಮಗೆ
ಮುಕ್ತಿ.........

೨. ಅರಿಯುವ ಮೊದಲೇ ಬರುವುದು ’ಪ್ರೀತಿ’….
ಕಾರಣ ಬೇಡ ನಿರಾಸೆಯ ’ಭೀತಿ’ ಯಿದ್ದರೂ…
ಸಾಗುವುದೆಂಬ ಭ್ರಮೆಯಲ್ಲಿ
ಓಡುತಿದೆ ಬಾಳ ಬಂಡಿ ಎತ್ತ ಕಡೆಗೋ….
ದಾರಿ ಮುಗಿದು ಹೋಗಿದೆ…ಮಾತು ಬರದಾಗಿದೆ…
ತಿಳಿಸುವ ಹಂಬಲವಿದ್ದರೂ ಬೇಡವೆನ್ನುತಿದೆ
ಈ ಮನವು……

೩. ಯಾರದೋ ರಾಗಕೆ ಮನ ಕುಣಿಯುತಿದೆ….
ಯಾವುದೋ ತಾಳಕೆ ಹೆಜ್ಜೆ ಹಾಕುತಿದೆ….
ಹೊಸತನದೆಡೆಗೆ ಹಂಬಲಿಸುತಿದೇ ಮನವು…
ಹಳೆ ನೆನಪುಗಳನ್ನು ಮರೆಯುತ್ತಾ..
ಇಂದಿನ ಹೊಸತು ನಾಳೆಗೆ ಹಳತೆಂಬ ಅರಿವಿದ್ದರೂ
ಈ ಹಂಬಲ( ಹುಡುಕಾಟ) ಸರಿಯೇ????
ತಿಳಿಯದಾಗಿದೆ ಈ ಪುಟ್ಟ ಹೃದಯಕೆ…...
೪.ನನ್ನಾಕೆ:
ಬಿಸಿಲಲ್ಲಿ ನೆರಳಾಗಿ ನಿದ್ದೆಯಲಿ ಕನಸಾಗಿ,
ಬರುವಳು ಇರುಳಲ್ಲಿ ಬೆಳದಿಂಗಳಾಗಿJ
ಹುಣ್ಣಿಮೆಯ ಶಶಿಯಂತೆ ಮಂದಹಾಸವನಿತ್ತು,
ನವಿಲಿನಾ ಗರಿಯಂಥ ಕೇಶ ರಾಶಿಯ ಹೊತ್ತು,
ಕಣ್ಣಿನಾ ನೋಟದಲೆ ಮರುಳು ಮಾಡುವಳು….
ತಂಗಾಳಿಯು ನನಗೆ ಅವಳಾ ಆ ಉಸಿರು,
ಜೀವಕ್ಕೆ ’ಪ್ರೇರಣೆ’ಯು ಅವಳಾ ಆ ಹೆಸರು…
ಅವಳು ಆರೂ ಅಲ್ಲ ಅವಳು ನನ್ನವಳು...
ನನ್ನ ಹೃದಯವ ಗೆದ್ದ ಚಿನ್ನದಾ ಗಣಿಯು.....
ದೇವತೆ:
ಕಣ್ಣಿಲ್ಲದವರಿಗೆ ದೂರದೃಷ್ಟಿಯು ಅವಳು…
ಮೂಗರ ಮನದೊಳಗೆ ಇಂಪಾದ ಹಾಡು...
ಸ್ಪೂರ್ತಿಯ ಕಡಲಿಗೆ ಈಕೆಯೇ ಒಡತಿ,
ಒಟ್ಟಾರೆ ಅವಳೊಂದು ಅದ್ಭುತ ಶಕ್ತಿ…
ಏಕಾಂಗಿ
ಸೂರ್ಯಚಂದ್ರರೂ ಒಂಟಿಯಲ್ಲವೇ??
ಅವರಿಗೂ ಈ ನೋವು ಕಾಡಿರಬಹುದೇ??
ಬೇಕಾದವರು ಇನ್ನೂ ಬೇಕೆಂದೆನಿಸಿದೆ…
ಇದು ಆಸೆಯೋ?? ನಿರಾಸೆಗೆ ದಾರಿಯೋ??ತಿಳಿಯದಾಗಿದೆL
ಹೃದಯ ಬಡಿತಕೆ ಮನವು ಹೆಜ್ಜೆ ಹಾಕದೆ,
ಏಕಾಂಗಿತನವನು ಒತ್ತಿ ಹೇಳುತಿದೆ……

1 comment:

  1. priya gelaya nemma summane kavana thumba arthpoornavagidhe, nevu madhuve ade mele gothaguthe jeevana andre enu? nanu appa amma sister brother friend antha work ellavannu thumba prithi madutha idde, adre madadi bandre enu kaadu nodi, hennu hennige shathru maduthale,ಏಕಾಂಗಿyagi a kadenu e kadenu illa aguthe jeevana. hethavargu noovu namagu noovu

    ReplyDelete